ಶಾಲಾ ಶುಲ್ಕ
ಶಾಲಾ ಗುಂಪು ಭೇಟಿ ವಿವರಗಳು
ವಿದ್ಯಾರ್ಥಿಗಳು ಕೆಳಗೆ ತಿಳಿಸಿದಂತೆ ರಿಯಾಯಿತಿಯನ್ನು ಪಡೆಯಬಹುದು.
ವೈಲ್ಡ್-ಎಡ್
ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ)ವು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ “ವೈಲ್ಡ್-ಎಡ್” ಎಂಬ ದಿನವಿಡೀ ಶೈಕ್ಷಣಿಕ ಪ್ಯಾಕೇಜ್ ಅನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳನ್ನು ಪ್ರಕೃತಿಯೊಂದಿಗೆ ಸಂಪರ್ಕಗೊಳಿಸುವುದು, ಜೀವವೈವಿಧ್ಯದ ಮಹತ್ವವನ್ನು ಅರಿವು ಮೂಡಿಸುವುದು ಹಾಗೂ ಸಂರಕ್ಷಣೆಗೆ ಅವರು ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಭೇಟಿಯನ್ನು ಪರಿಣಾಮಕಾರಿ ಮತ್ತು ಶೈಕ್ಷಣಿಕವಾಗಿಸಲು ಗರಿಷ್ಠ 50 ವಿದ್ಯಾರ್ಥಿಗಳ ಗುಂಪಿಗೆ ಮೀಸಲಾದ ಮಾರ್ಗದರ್ಶಿಯನ್ನು ಒದಗಿಸಲಾಗುತ್ತದೆ. ಇದರೊಂದಿಗೆ, ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದ್ದು, ಕನಿಷ್ಠ 25 ವಿದ್ಯಾರ್ಥಿಗಳ ಗುಂಪಿಗೆ ಪಾರ್ಕಿಂಗ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಚಿತ ಬುಕಿಂಗ್ ಅಗತ್ಯವಾಗಿರುತ್ತದೆ.
| ಹಂಚಿಕೊಳ್ಳಿ | ಆಯ್ಕೆ 1: ಮೃಗಾಲಯ + ಸಫಾರಿ + ಚಿಟ್ಟೆ ಉದ್ಯಾನವನ |
ಆಯ್ಕೆ 2: ಮೃಗಾಲಯ + ಚಿಟ್ಟೆ ಉದ್ಯಾನವನ |
|---|---|---|
| 1 ರಿಂದ 5 ನೇ ತರಗತಿ | ರೂ. 250 | ರೂ. 100 |
| 6 ರಿಂದ 12 ನೇ ತರಗತಿ | ರೂ. 380 | ರೂ. 120 |
| ಶಿಕ್ಷಕ / ವಯಸ್ಕರು | ರೂ. 400 | ರೂ. 150 |
ನೋಂದಾಯಿಸಲು ಕ್ಲಿಕ್ ಮಾಡಿ : https://forms.gle/jCuMyRTzqBDQLVi49
ಮಾರ್ಗದರ್ಶಿ ಇಲ್ಲದ ಶಾಲಾ ಪ್ರವಾಸ
ಮಾರ್ಗದರ್ಶಿ ಇಲ್ಲದ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಬರುವ ಯಾವುದೇ ಇತರ ಸಿಬ್ಬಂದಿಗೆ ಸಾಮಾನ್ಯ ಪ್ರವೇಶ ದರಗಳು ಅನ್ವಯಿಸುತ್ತವೆ. ಶಾಲಾ ಗುಂಪು ದರಗಳು 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ ಮತ್ತು ಈ ದರ್ಜೆಗಿಂತ ಹೆಚ್ಚಿನವರಿಗೆ, ಸಾಮಾನ್ಯ ವಯಸ್ಕ ದರಗಳು ಅನ್ವಯಿಸುತ್ತವೆ. ಅಲ್ಲದೆ, ವಾಹನಗಳಿಗೆ ಸಾಮಾನ್ಯ ಪಾರ್ಕಿಂಗ್ ದರಗಳು ಅನ್ವಯಿಸುತ್ತವೆ.
| ಮೃಗಾಲಯ ಮಾತ್ರ | ಚಿಟ್ಟೆ ಉದ್ಯಾನವನ ಮಾತ್ರ | ಮೃಗಾಲಯ + ಸಫಾರಿ | |
|---|---|---|---|
| ಎಲ್‌ಕೆಜಿ ವರೆಗೆ | ಉಚಿತ | ಉಚಿತ | ರೂ. 120 |
| ಯುಕೆಜಿಯಿಂದ 5ನೇ ತರಗತಿವರೆಗೆ | ರೂ. 30 | ರೂ. 30 | ರೂ. 150 |
| 6 ರಿಂದ 12 ನೇ ತರಗತಿ | ರೂ. 50 | ರೂ. 30 | ರೂ. 280 |
| ಶಾಲಾ ಸಾರಿಗೆ ವಾಹನ ಪಾರ್ಕಿಂಗ್ ಶುಲ್ಕ | ಮಿನಿ ಬಸ್: ರೂ. 70/- ಶಾಲಾ ಬಸ್: ರೂ. 120/- |
ಮಿನಿ ಬಸ್: ರೂ. 70/- ಶಾಲಾ ಬಸ್: ರೂ. 120/- |
ಮಿನಿ ಬಸ್: ರೂ. 70/- ಶಾಲಾ ಬಸ್: ರೂ. 120/- |
ಮಾರ್ಗದರ್ಶಿ ಪ್ರವಾಸವಿಲ್ಲದೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಬರುವ ಯಾವುದೇ ಇತರ ಸಿಬ್ಬಂದಿಗೆ ಸಾಮಾನ್ಯ ಪ್ರವೇಶ ದರಗಳು ಅನ್ವಯಿಸುತ್ತವೆ. ಶಾಲಾ ಗುಂಪು ದರಗಳು 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ ಮತ್ತು ಈ ದರ್ಜೆಗಿಂತ ಹೆಚ್ಚಿನವರಿಗೆ, ಸಾಮಾನ್ಯ ವಯಸ್ಕ ದರಗಳು ಅನ್ವಯಿಸುತ್ತವೆ. ಅಲ್ಲದೆ, ವಾಹನಗಳಿಗೆ ಸಾಮಾನ್ಯ ಪಾರ್ಕಿಂಗ್ ದರಗಳು ಅನ್ವಯಿಸುತ್ತವೆ.
ಶಾಲಾ ಗುಂಪು ದರಗಳನ್ನು ಪಡೆಯಲು, ದಯವಿಟ್ಟು ನಿಮ್ಮ ಶಾಲಾ ಲೆಟರ್‌ಹೆಡ್‌ನಲ್ಲಿ, ವಿದ್ಯಾರ್ಥಿಗಳ ಸಂಖ್ಯೆ, ಅವರ ವಯಸ್ಸು, ಗುಂಪು, ಭೇಟಿಯ ದಿನಾಂಕವನ್ನು ನಮೂದಿಸಿ, ಕಾರ್ಯನಿರ್ವಾಹಕ ನಿರ್ದೇಶಕರು, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು ಇವರಿಗೆ ವಿಳಾಸಿಸಿರುವ ಪತ್ರದ ಪ್ರತಿಯನ್ನು ಸಲ್ಲಿಸಿ, ಟಿಕೆಟ್ ಕೌಂಟರ್‌ನಲ್ಲಿ ಟಿಕೇಟ್ ಪಡೆಯಬಹುದು.
ಚಿನ್ನಾರ ಮೃಗಾಲಯ ದರ್ಶನ
ಕರ್ನಾಟಕದ ಯಾವುದೇ ಸರ್ಕಾರಿ ಶಾಲೆಯು, ಬನ್ನೇರುಘಟ್ಟ ಜೈವಿಕ ಉದ್ಯಾನವನವು ನೀಡುವ ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮದ ಭಾಗವಾಗಿ ಮೃಗಾಲಯ ಮತ್ತು ಚಿಟ್ಟೆ ಉದ್ಯಾನವನಕ್ಕೆ ಉಚಿತ ಪ್ರವೇಶವನ್ನು ಪಡೆಯಬಹುದು. ಇದು ಮಂಗಳವಾರ ಹೊರತುಪಡಿಸಿ ವಾರದ ದಿನಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಪೂರ್ವ ನೋಂದಣಿ ಅಗತ್ಯವಿದೆ ಮತ್ತು ಪ್ರತಿ ಶಾಲೆಯು ಈ ಕಾರ್ಯಕ್ರಮದ ಭಾಗವಾಗಿ ವರ್ಷಕ್ಕೊಮ್ಮೆ ಗರಿಷ್ಠ 80 ವಿದ್ಯಾರ್ಥಿಗಳವರೆಗೆ ಭೇಟಿ ನೀಡಬಹುದು. ಶಾಲಾ ಗುಂಪಿಗೆ ಮಧ್ಯಾಹ್ನದ ಊಟದ ಸೌಲಭ್ಯವನ್ನು ಸಹ ಒದಗಿಸಲಾಗುವುದು.
ದಯವಿಟ್ಟು ಗಮನಿಸಿ, ಉದ್ಯಾನದ ಎಲ್ಲಾ ವಿಭಾಗಗಳು ಮಂಗಳವಾರದಂದು ಮುಚ್ಚಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶಿಕ್ಷಣಾಧಿಕಾರಿ: 9035092797,
education@bannerughattabiopark.org
