ಬನ್ನೇರುಘಟ್ಟ ಜೈವಿಕ ಉದ್ಯಾನವನವು (ಬಿಬಿಪಿ) ಕರ್ನಾಟಕ ಮೃಗಾಲಯ ಪ್ರಾಧಿಕಾರದ ಒಂದು ಘಟಕವಾಗಿದ್ದು, ಜಾಗತಿಕವಾಗಿ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ. ಬೆಂಗಳೂರಿನಂತಹ ಮಹಾ ನಗರಕ್ಕೆ ಸಮೀಪದಲ್ಲಿ ಅರಣ್ಯವನ್ನು ಸಂರಕ್ಷಿಸಿರುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿರುತ್ತದೆ. ಬಿಬಿಪಿಯು ಸುಮಾರು 731.88 ಹೆಕ್ಟರ್ ಪ್ರದೇಶ ವ್ಯಾಪ್ತಿ ಹೊಂದಿದ್ದು ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಮತ್ತು ಪುನರ್ವಸತಿ ಕೇಂದ್ರಗಳಂತಹ 4 ವಿಭಿನ್ನ ಘಟಕಗಳನ್ನು ಹೊಂದಿದೆ.